User talk:Bemmer baiderugala garodi Agathady
ಉತ್ತರ ದಿಕ್ಕಿನಲ್ಲಿ ನೇತ್ರಾವತಿ ,ದಕ್ಷಿಣದಲ್ಲಿ ಕುಮಾರಧಾರ ,ಪೂರ್ವದಲ್ಲಿ ಕುಕ್ಕೆ ಸುಬ್ರಮಣ್ಯ, ಪಶ್ಚಿಮದಲ್ಲಿ ಗಯಾಪದ ಕ್ಷೇತ್ರ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಹೀಗೆ ಸುತ್ತಲೂ ದೇವಸ್ಥಾನ ,ನದಿ ತೊರೆ ,ಬೆಟ್ಟಗುಡ್ಡ ,ಹಚ್ಚಹಸಿರಿನಿಂದ ಕೂಡಿದ ದೈವ ದೇವರ ಆರಾಧಕರಿರುವ ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪೆರಾಬೆ ಗ್ರಾಮದ ಬೆರ್ಮೆರ್ ಮತ್ತು ಪರಿವಾರ ದೈವಗಳು ಹಾಗು ಇನವುಳ್ಳ ಬಂಟರು ಅಮರ ವೀರರು ಕಾರಣೀಕ ಪುರುಷರಾದ ಕೋಟಿ ಚೆನ್ನಯ್ಯರು ಪ್ರೀತಿಯಿಂದ ಪೇರ್ ಉಂಡ (ಪೇರ ಮುಂಡ,) ಕಾರಣಿಕ ತೋರಿಸಿದ ಪವಿತ್ರ ಕ್ಷೇತ್ರ ಅಗತ್ತಾಡಿ ದೋಳ ಬಾರಿಕೆ .ಈ ಕ್ಷೇತ್ರದಲ್ಲಿ ಇರುವ ಆರಾಧ್ಯ ದೈವಗಳು ಜುಮಾದಿ , ವರ್ಣಾರ ಪಂಜುರ್ಲಿ ,ಕುಪ್ಪೆ ಪಂಜುರ್ಲಿ ,ಮೂವ ಪಂಜುರ್ಲಿ ,ಅಂಗಣತ್ತಾಯ ,ಜಾವದೆ ,ಕಲ್ಲುರ್ಟಿ ,ಗುಳಿಗ ,ರಾವು , ಕುಂಟಲ್ತಾಯ, ದೈಯ್ಯೊಂಕುಲು, ಮೈಸಂದಾಯ ,ಕೊಡಮಂದಾಯ , ಶಿರಾಡಿ ,ಚಾಮುಂಡಿ ದೈವಗಳು ಅಷ್ಟ ದಿಕ್ಕಿನಲ್ಲಿ ನೆಲೆನಿಂತು ಈ ಕ್ಷೇತ್ರದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ .ಇತಿಹಾಸ ಪುಟಗಳತ್ತ ನೋಡಿದರೆ ಸುಮಾರು 400 ರರಿಂದ 450 ವರ್ಷಗಳ ಹಿಂದಕ್ಕೆ ಸರಿಯುತ್ತದೆ ....
ಸುಮಾರು 450 ವರ್ಷಗಳ ಹಿಂದೆ ಅಗತ್ತಾಡಿ ಪ್ರದೇಶದಲ್ಲಿ ಬಿಲ್ಲವ ಜನಾಂಗದ ಬಾರಿಕೆ ಮನೆತನದವರು ಅಧಿಕಾರವನ್ನು ಪಡೆದಿದ್ದರು .ಪಡುಮಲೆಯಿಂದ ಹೊರಟುಬಂದ ಕೋಟಿ ಚೆನ್ನಯ್ಯರು ,ಇಲ್ಲಿನ ಕುಮಾರಧಾರ ನದಿ ದಾಟಿ ಸಂಜೆಯ ಇಳಿಹೊತ್ತಿನಲ್ಲಿ ಬಂದು ಅಗತ್ತಾಡಿಯ ದೋಲ ಬಾರಿಕೆ ಮನೆತನದ ಮನೆಯವರಲ್ಲಿ ಬಾಯಾರಿಕೆ ಕೇಳುತ್ತಾರೆ .ಆಗ ಅವರಲ್ಲಿ ನೀವ್ಯಾರೆಂದು ಮನೆಯವರು ಕೇಳಲು ,ನಾವಿಬ್ಬರು ಬಿಲ್ಲವ ಕುಟುಂಬದಲ್ಲಿ ಹುಟ್ಟಿದ ಅವಿ ಜವಳಿ ಹಾಗು ನಮಗೆ ಬಾಯಾರಿಕೆ ಕುಿಯಲು ಹಾಲನ್ನು ಕೇಳಲು ಮನೆಯೊಡತಿ ಹಾಲಿಲ್ಲ ಎನ್ನಲು ಒಳಗೆ ಹೋಗಿ ನೋಡಿ ತಾಯಿ ಹೇಳಿದಾಗ ,ಮನೆಯೊಡತಿ ಹೋಗಿ ನೋಡಲು ಪ್ರ ತಿಯೊಂದು ಮಡಿಕೆಯಲ್ಲಿ ಹಾಲು ತುಂಬಿರಲು, ರೋಮಾಂಚಿತಾಗಿ ಹಾಲು ತಂದು ಕುಡಿಯಲು ಕೊಟ್ಟು ,ಕುಡಿದ ಪಾತ್ರೆ ಒಳಗಿಟ್ಟು ಬರಲು ಒಳಗೆ ಬಂದು ನೋಡಿದಾಗ ಎಲ್ಲಾ ಪಾತ್ರೆಯಲ್ಲೂ ಯಥಾ ಸ್ಥಿತಿ ನೀರಿರಲು ಆಶ್ಚರ್ಯಪ ಟ್ಟು ಹೊರಗೆ ಬಂದು ನೋಡಲು ಇಬ್ಬರು ಯುವಕರು ಅಲ್ಲಿ ಇಲ್ಲದಿರಲು ಅವರು ಕೂತಿರುವ ಜಾಗದಿ ಒಂದು ಸುರಿಯ ಮತ್ತು ಒಂದು ಚೊಂಬಿನ ಗಿಂಡೆ ಇರುತ್ತದೆ ,ಅದನ್ನು ಆಕೆ ಮರದ ಕಲ್ಲೆಂಬಿಯಲ್ಲಿ ಇಡುತ್ತಾಳೆ.ಕಾಲ್ರಮೇಣ ಅವರ ಸಂತತಿ ಅಳಿದುಹೋಗಿ ಮನೆ ಬಿದ್ದು ಭೂ ಗರ್ಭದಲ್ಲಿ ಸೇರಿರುತ್ತದೆ .ಕ್ರಮೇಣ ಆ ಜಾಗ ಗೌಡ ಮನೆತನಕ್ಕೆ ಹೋಗಿ ಅವರಿಂದ ಬ್ರಾಹ್ಮಣರಿಗೆ ಹೋಗಿ ಅವರಿಂದ ಮುಗ್ಗ ಗುತ್ತಿನ ಬಿಲ್ಲವ ಸಂತತಿ ಗೆ ಬಂದಿರುತ್ತದೆ.
ಈ ಬಿಲ್ಲವರ ಕಾಲದಿ ಈಗ ಗರಡಿ ಇರುವ ಜಾಗದಲ್ಲಿ ವ್ಯವಸಾಯ ನಿಮಿತ್ತವಾಗಿ ನೆಲ್ಲಿಕಾಯಿ ಮರ ಕಡಿದು ಬುಡ ಅಗೆಯಲು ಆ ಬುಡದಲ್ಲಿ ಸುರಿಯ ಮತ್ತು ಚೊಂಬಿನ ಗಿಂಡಿಯನ್ನು ತಂದು ದೈವದ ಕೋಣೆಯಲ್ಲಿಡುತ್ತಾರೆ.ಆ ರಾತ್ರಿ ಮನೆಯ ಯಜಮಾನನಿಗೆ ಕನಸಿನಲ್ಲಿ ಕೋಟಿಚೆನ್ನಯರು ಬಂದು ನಾವು ಕಾರಣಿಕ ಪುರುಷರಾದ ಕೋಟಿಚೆನ್ನಯರು ನಮಗೆ ಗರಡಿ ಕಟ್ಟಿ ,ಬಿರ್ಮೆರ ಗುಂಡ ಕಟ್ಟಿ ನಮ್ಮನ್ನು ಪಾಲಿಸಿಕೊಂಡು ಬನ್ನಿ ನಿಮ್ಮ ಕುಲವನ್ನು ಗ್ರಾಮಸ್ಥರನ್ನು ರಕ್ಷಿಸಿಕೊಂಡು ಬರುತ್ತೇವೆ ಎಂದು ಅಭಯ ನೀಡುತ್ತಾರೆ .ಬೆಳಗ್ಗೆ ಎದ್ದು ನೋಡಲು ಬೇಯಿಸಿದ ಭತ್ತವು ಮೊಳಕೆ ಬಂದಿರಲು ನಿಮಿತ್ತ ಮಾತ್ರದಲ್ಲಿ ಕೇಳಿದಾಗ ಬೈದೇರುಗಳು ಪ್ರವೇಶ ಮಾಡಿರುವುದು ಗೋಚರಿಸಲು ಅದೇ ಪ್ರಕಾರವಾಗಿ ಸಿಕ್ಕಿದಂತಹ ಸುರಿಯ ಮತ್ತು ಗಿಂಡೆ ಯನ್ನು ಮಣಿಮಂಚದಲ್ಲಿ ಇಟ್ಟು ಆರಾಧಿಸಿಕೊಂಡು ಬರುತ್ತಾರೆ .ಕಾಲ ಕ್ರಮೇಣ ಇವರ ಕೈಯಿಂದ 250 ವರ್ಷಗಳ ಹಿಂದೆ ಈಗಿರುವ ಬಂಗೇರ ಬಿಲ್ಲವ ಸಂತತಿಯವರು ಬೈದೇರುಗಳನ್ನು ನಂಬಿಕೊಂಡು ವರ್ಷಾವಧಿ ಸೇವೆಯನ್ನು ನೀಡುತ್ತ ಕ್ಷೇತ್ರವನ್ನು ಜೀರ್ಣೋದ್ದಾರ ಮಾಡುತ್ತಿದ್ದಾರೆ.
ಇಲ್ಲಿನ ವಿಶೇಷ ಎಂದರೆ ಬೈದೇರುಗಳು ಈ ಕ್ಷೇತ್ರಕ್ಕೆ ಜೀವಂತ ಇರುವಾಗ ಬಂದು ಬೆರ್ಮೆರನ್ನು ಸಿದ್ದಿ ಮಾಡಿದ್ದು , ಬೈದೇರುಗಳ ಆಯುಧಗಳು ಇಲ್ಲಿ ಕಂಡು ಬರುತ್ತದೆ... ಈ ಕ್ಷೇತ್ರವು ಬಹಳ ಕಾರಣಿಕವಾಗಿದ್ದು ಇಲ್ಲಿಗೆ ಹೇಳಿದ ಹರಕೆ ಗಳು ನಿಜವಾಗುತ್ತಿದೆ.. ಪ್ರತಿ ತಿಂಗಳು ಸಂಕ್ರಾಂತಿ ಪೂಜೆಯು ನಡೆಯುತ್ತಿದ್ದು ತದ ನಂತರ ಅನ್ನಸಂತರ್ಪಣೆ ನಡೆಯುತ್ತಿದೆ ....
ಜೈ ಬೆಮ್ಮೆರ್ ಬೈದೆರ್ಲು #
Start a discussion with Bemmer baiderugala garodi Agathady
Talk pages are where people discuss how to make content on Wikipedia the best that it can be. Start a new discussion to connect and collaborate with Bemmer baiderugala garodi Agathady. What you say here will be public for others to see.