Jump to content

User:ಹಸಿವು/sandbox

From Wikipedia, the free encyclopedia

ಹಸಿವು:

[edit]
ಹಸಿವು

ಹಸಿವು:- ಮನುಷ್ಯನ ಹೊಟ್ಟೆ ಹಸಿವು. ಪ್ರಪಂಚದ ಎಲ್ಲಾ ತಾಯಂದಿರಿಗೆ ಜನನವಾಗುವ ಮಗು ಅಳುತ್ತದೆ ಭೂಮಿಗೆ ಬಂದ ಕಂದನ ಮೊದಲ ಅಳುವಿನಿಂದಲೇ ಶುರುವಾಗುವುದು ಹಸಿವು ಪ್ರಪಂಚದಲ್ಲಿ ೮೮ ಸಾವಿರಕೋಟಿ ಜೀವರಾಶಿಗಳು ಇವೆ ಎಲ್ಲಾ ಜೀವರಾಶಿಗಳಿಗೂ ಹಸಿವು ಸಾಮಾನ್ಯ ಬುದ್ದಿಜೀವಿ ಎನಿಸಿಕೊಂಡಿರುವ

ಮಾನವ ಮೊದಲನೆಯವನಾಗಿರುತ್ತಾನೆ ಮಾನವ ಹಸಿವಾಗುವುದನ್ನು ಹೇಳಿಕೊಳ್ಳುತ್ತಾನೆ ಪ್ರಾಣಿ, ಪಕ್ಷಿ ಹಾಗೂ ಜಲಚರ ಉಭಯವಾಸಿಗಳಿಗೂ ಹಸಿವು ಅನ್ನುವುದು ಇರುತ್ತದೆ ಅವುಗಳು ಹಸಿವನ್ನು ಹೇಳಿಕೊಳ್ಳಲಾರವು ಪ್ರಾಣಿಗಳು ಆಹಾರಕ್ಕಾಗಿ ಒಂದು ಪ್ರಾಣಿಯನ್ನು ಇನ್ನೊಂದು ಪ್ರಾಣಿ ಹಿಡಿದು ಭಕ್ಷಿಸುತ್ತದೆ ಇದನ್ನು ಜೀವನ ಚಕ್ರ ಎಂತಲೂ ಕರೆಯಬಹುದು ಮೊದಲು ಮನುಷ್ಯನು ಪ್ರಾಣಿಗಳನ್ನು ಭೇಟೆಯಾಡಿ ಹಸಿ ಮಾಂಸವನ್ನು ಭಕ್ಷಿಸುತ್ತಿದ್ದನು ಮಾನವ ಆಧುನಿಕವಾಗಿ ಬದಲಾಗುತ್ತಾ ಹೋಸ ಆಲೋಚನೆಗಳಿಂದ ಹೋಸ ಬದುಕನ್ನು ಕಂಡುಕೊಂಡನು ಮೊದಲು ಆದಿಮಾನವ ನಂತರ ಬುದ್ದಿವಂತ ಮಾನವ ಹೇಗಾಗುತ್ತಾನೆ ಇವೆಲ್ಲವೂ ನಮ್ಮ ಪೂರ್ವಜರು ಆದಿಮಾನವ ಕಂಡುಕೊಂಡ ಆಹಾರ ಪದ್ದತಿ .

ಆದಿ ಕಾಲದಿಂದಲೂ ಮಾನವ ಹಸಿವನ್ನು ನೀಗಿಸಿಕೊಳ್ಳಲು ಹಸಿ ಮಾಂಸ ಗಡ್ಡೆ ಗೆಣಸು ಸೊಪ್ಪು ತರಕಾರಿ ಇವುಗಳನ್ನು ತಿನ್ನಲು ಶುರುಮಾಡಿದ ಆದಿಮಾನವ ತನ್ನದೇ ಶೈಲಿಯಲ್ಲಿ ಉಡುಪುಗಳನ್ನು ಧರಿಸುತಿದ್ದ ಎಲೆ ತೊಗಟೆ ಚರ್ಮ ಇತ್ಯಾದಿಗಳನ್ನು ಬಳಸುತಿದ್ದ ತದನಂತರ ಕಾಡಿನ ಗುಹೆಗಳಲ್ಲಿ ವಾಸಿಸುತಿದ್ದ ಮಳೆ,ಗಾಳಿ ಬಿಸಿಲು ಇವುಗಳಿಂದ ತನ್ನ ರಕ್ಷಣೆಗಾಗಿ ಗುಹೆಯನ್ನು ಸೇರುತಿದ್ದ ಮನುಷ್ಯನು ಆಹಾರಕ್ಕಾಗಿ ಕಾಡುಗಳಲ್ಲಿ ಹುಡುಕಾಟ ನೆಡೆಸುತಿದ್ದ.ಹಸಿವನ್ನು ನೀಗಿಸಿಕೊಳ್ಳಲು ಅಲೆಯುತಿದ್ದ ಮನುಷ್ಯ ಆದುನಿಕವಾಗಿ ಬದಲಾಗುತ್ತಾ ಹೋಸ ಆಲೋಚನೆಗಳಿಂದ ಮಾನವ ಹೋಸ ಬದುಕನ್ನು ಕಂಡುಕೊಂಡನು ಮನುಷ್ಯ ಹಸಿ ಮಾಂಸ ಹಾಗೂ ಗಡ್ಡೆ ಗೆಣಸುಗಳನ್ನು ಹಸಿಯಾಗಿ ತಿನ್ನುತಿದ್ದ ಆನಂತರ ಬೇಯಿಸಿ ತಿನ್ನುವ ಕ್ರಮವನ್ನು ಕಾಡಿನಲ್ಲಿ ಇರುವ ಜನರು ಕಂಡುಕೊಂಡರು ಹೇಗೆಂದರೆ ಆ ಸಮಯದಲ್ಲಿ ಬೆಂಕಿ ಇರಲಿಲ್ಲ . ಕಾಡ್ಗಿಚ್ಚು ಎಂದರೆ ಕಾಡಿನಲ್ಲಿ ಬೆಂಕಿ ಉದ್ಬವವಾಗಿರುವ ಸಮಯದಲ್ಲಿ ಮನುಷ್ಯ ಆಹಾರ ಹುಡುಕಿಕೊಂಡು ಅಲೆಯುತ್ತಿರುವಾಗ ಗಡ್ಡೆ ಗೆಣಸುಗಳು ಬೆಂಕಿಯಲ್ಲಿ ಸುಟ್ಟು ಬೆಂದು ಹೋಗಿದ್ದವು ಹಸುವಿನಿಂದ ಮಾನವ ಅದನ್ನೆ ತಿನ್ನಲು ಶುರುಮಾಡಿದ ಅದು ರುಚಿಯಾಗಿ ಕಂಡಿತು ಅಂದಿನಿಂದ ಬೇಯಿಸಿ ತಿನ್ನಲು ಹುಡುಕಾಟ ಶುರುಮಾಡಿದ ಬೆಂಕಿಯನ್ನು ತಯಾರಿಸಲು ನಾನ ಪ್ರಯತ್ನಗಳನ್ನು ಮಾಡಿದ ಆ ಸಮಯದಲ್ಲಿ ಬಿರುಗಾಳಿ ಕಾಣಿಸಿಕೊಂಡಿತು ಮನುಷ್ಯ ನೋಡನೋಡುತ್ತಲೇ ಮರ ಗಿಡ ಬೆಟ್ಟ ಗುಡ್ಡ ಇವುಗಳೆಲ್ಲವೂ ಉರುಳತೊಡಗಿದವು ಬಂಡೆಗಳು ಸಹ ಒಂದು ಬಂಡೆಯು ಇನ್ನೊಂದು ಬಂಡೆಗೆ ಬಡಿದಾಗ ಅದರ ರಭಸಕ್ಕೆ ಬೆಂಕಿಯ ಕಿಡಿಯೊಂದು ಕಾಣಿಸಿಕೊಂಡಿತು ಆ ಬೆಂಕಿಯ ಕಿಡಿಯು ಪಕ್ಕದಲ್ಲೆ ಇರುವ ಒಣಗಿದ ಮರದ ರಂಬೆ ಹಾಗೂ ಎಲೆಗಳ ಮೇಲೆ ಬಿದ್ದಾಕ್ಷಣ ಬೆಂಕಿಯು ಕಾಣಿಸಿಕೊಂಡಿತು ಆ ಬೆಂಕಿಯನ್ನೇ ಕಾಡ್ಗಿಚ್ಚು ಎನ್ನುತ್ತಾರೆ ಇದರಿಂದ ಭಯಗೊಂಡ ಮಾನವ ಗುಹೆ ಸೇರಿಕೊಳ್ಳುತ್ತಾನೆ ನಂತರ ಮಳೆ ಬರುತ್ತದೆ ಮಾನವನಿಗೆ ಮತ್ತೆ ಹಸಿವು ಶುರುವಾಗುತ್ತದೆ ಹೊರಗಡೆ ನೋಡುವಾಗ ಮಳೆಯು ಮಾಯವಾಗಿತ್ತು ಬೆಂಕಿಯು ಮಾಯವಾಗಿತ್ತು ಇದನ್ನರಿತ ಮಾನವ ಬೆಂಕಿಯನ್ನು ತಯಾರಿಸಲು ನಾನ ಪ್ರಯತ್ನಗಳನ್ನು ಮಾಡಿದ ರೀತಿ ಕಲ್ಲಿನಿಂದ ಕಲ್ಲಿಗೆ ಹೊಡೆದರೆ ಬೆಂಕಿ ಉತ್ಪತ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಂಡನು.ನಂತರ ಬೆಂಕಿಯನ್ನು ಆರಿಸಲು ನೀರನ್ನು ಬಳಸಬೇಕು ಏಂಬುವುದನ್ನು ತಿಳಿದುಕೊಂಡನು ಹಸಿವನ್ನು ನೀವಾರಿಸಿಕೊಳ್ಳಲು ನೀರು,ಗಾಳಿ ಬೆಳಕು ಆಹಾರ ಇವುಗಳೆಲ್ಲವೂ ಅಗತ್ಯವಾದುದು ಹಸಿವೆಂಬುವುದು ಜನ್ಮದಿಂದ ಹಿಡಿದು ಮರಣದವರೆಗೂ ಹಸಿವಿರುತ್ತದೆ ಹೊಟ್ಟೆ ಇರುವವರೆಗೂ ಹಸಿವು ನಿಲ್ಲದು ಕ್ರಮೇಣ ಮಾನವ ಬುದ್ದಿವಂತನಾಗಿ ಎಲ್ಲವನ್ನೂ ತಿಳಿದುಕೊಂಡನು.ದೇಹವನ್ನು ಮುಚ್ಚಲು ಬಟ್ಟೆ ಬೇಕು ಹಸಿವನ್ನು ನೀವಾರಿಸಿಲು ಆಹಾರ ಬೇಕು ಬಾಯಾರಿಕೆಗೆ ನೀರು ಬೇಕು ಉಸಿರಾಡಲು ಗಾಳಿ ಬೇಕು ಕತ್ತಲೆಯನ್ನು ಹೋಗಲಾಡಿಸಲು ಬೆಳಕು ಬೇಕು ಇವೆಲ್ಲವನ್ನೂ ವೈಜನಿಕವಾಗಿ ತಿಳಿಸಬೇಕಾದರೆ ಮೊದಲು ಆಹಾರ ತೆರಳುವ ಜಾಗವೇ ಬಾಯಿ

ಬಡತನದ ಹಸಿವು

[edit]

ಭಾರತದಲ್ಲಿ ಬಡತನ ಬಹುವ್ಯಾಪಕವಾಗಿದ್ದು, ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮ‌ೂರನೇ ಒಂದು ಭಾಗ ರಾಷ್ಟ್ರದಲ್ಲಿದ್ದಾರೆಂದು ಅಂದಾಜು ಮಾಡಲಾಗಿದೆ. ಭಾರತದ ಯೋಜನಾ ಆಯೋಗ ಬಳಸಿದ ಮಾನದಂಡದ ಅನ್ವಯ 2004-2005ರಲ್ಲಿ ಜನಸಂಖ್ಯೆಯ 27.5% ಬಡತನ ರೇಖೆ ಕೆಳಗೆ(ಕಡುಬಡತನ)ವಾಸಿಸಿದ್ದು, 1977-1978ರಲ್ಲಿ 51.3%ಗಿಂತ ಮತ್ತು 1993-1994ರಲ್ಲಿ 36%ಗಿಂತ ಕೆಳಮುಖದಲ್ಲಿದೆ.[೧] UN ಅಭಿವೃದ್ಧಿ ಕಾರ್ಯಕ್ರಮ, ಮಾನವ ಅಭಿವೃದ್ಧಿ ಸೂಚ್ಯಂಕದ((HDI)ಪ್ರಕಾರ,ಭಾರತದ ಜನಸಂಖ್ಯೆಯಲ್ಲಿ 75.6% ದಿನಕ್ಕೆ $2ಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ. ಪಾಕಿಸ್ತಾನದ 22.6%ಗೆ ಹೋಲಿಸಿದರೆ ಸುಮಾರು 41.6% ದಿನಕ್ಕೆ $1ಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ.[೨] ವಿಶ್ವಬ್ಯಾಂಕ್ ಅಂದಾಜು 2005ರ ಪ್ರಕಾರ, ಭಾರತದ 42% ಜನರು ಅಂತಾರಾಷ್ಟ್ರೀಯ ಬಡತನ ರೇಖೆಯಾದ ದಿನಕ್ಕೆ $1.25(PPP, ಅಂದಾಜು ನಗರಪ್ರದೇಶಗಳಲ್ಲಿ ದಿನಕ್ಕೆ 21.6 ರೂಪಾಯಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 14.3 ರೂಪಾಯಿಗಳು)ಗಿಂತ ಕೆಳಗಿದ್ದಾರೆ; 1980ರಲ್ಲಿ 60% ಅಂಕಿಅಂಶಕ್ಕಿಂತ ಕೆಳಗಿಳಿದಿದೆ.[೩]

ಭಾರತದಲ್ಲಿ ಅಧಿಕ ಮಟ್ಟದ ಬಡತನಕ್ಕೆ ಬ್ರಿಟಿಷ್ ಆಡಳಿತದಡಿಯ ಇತಿಹಾಸ, ಅಪಾರ ಜನಸಂಖ್ಯೆ ಮತ್ತು ಕಡಿಮೆ ಸಾಕ್ಷರತೆ ಕಾರಣಗಳನ್ನು ನೀಡಲಾಗಿದೆ. ಭಾರತದ ಜಾತಿ ಪದ್ಧತಿ ಮತ್ತು ಭಾರತದ ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ಭಾರತದ ಸಾಮಾಜಿಕ ಸ್ವರೂಪ ಕೂಡ ಮುಖ್ಯವಾಗಿದೆ. ಕೃಷಿ ಮೇಲೆ ಹೆಚ್ಚು ಅವಲಂಬಿತವಾದ್ದರಿಂದ ಮತ್ತು ಭಾರತದ ಸ್ವಾತಂತ್ರ್ಯದ ನಂತರ ಆರ್ಥಿಕ ನೀತಿಗಳನ್ನು ಅಳವಡಿಸಲಾಗಿದ್ದರಿಂದ ಹಿಂದಿನ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. ಭಾರತ ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಬಡತನ ನಿವಾರಣೆಗೆ 1950ರ ದಶಕದಿಂದೀಚೆಗೆ ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿತು. ಆಹಾರ ಮತ್ತಿತರ ಜೀವನಾವಶ್ಯಕ ವಸ್ತುಗಳಿಗೆ ಸಹಾಯಧನ,ಸಾಲಗಳಿಗೆ ಹೆಚ್ಚು ಅವಕಾಶ ಕಲ್ಪಿಸುವುದು, ಕೃಷಿ ತಂತ್ರಜ್ಞಾನಗಳು ಮತ್ತು ದರ ಬೆಂಬಲಗಳ ಸುಧಾರಣೆ, ಶಿಕ್ಷಣ ಮತ್ತು ಕುಟುಂಬ ಯೋಜನೆಗೆ ಉತ್ತೇಜನ ಇವುಗಳಲ್ಲಿ ಸೇರಿವೆ. ಈ ಕ್ರಮಗಳಿಂದ ಬರಗಾಲಗಳ ನಿವಾರಣೆಗೆ ನೆರವಾಯಿತು,ಪೂರ್ಣ ಬಡತನ ಮಟ್ಟಗಳು ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಂಡಿತು ಮತ್ತು ಅನಕ್ಷರತೆ ಮತ್ತು ಅಪೌಷ್ಠಿಕತೆ ಇಳಿಮುಖಗೊಂಡಿತು.[೪] ಆದಾಗ್ಯೂ,1990ರ ದಶಕದ ಮಧ್ಯಾವಧಿಯಿಂದ 30 ದಶಲಕ್ಷ ಜನರು ಹಸಿವಿನಿಂದ ನರಳುವವರ ಸಾಲಿಗೆ ಸೇರ್ಪಡೆಯಾದರು ಮತ್ತು 46% ಮಕ್ಕಳು ಕಡಿಮೆತೂಕವುಳ್ಳವರಾಗಿದ್ದರು. [೫]

ಭಾರತದ ಅತೀ ಬಡ ರಾಜ್ಯ ಬಿಹಾರದಲ್ಲಿ ಗ್ರಾಮೀಣ ಕಾರ್ಮಿಕ ಬೆರಣಿಯನ್ನು ಒಣಗಿಸುತ್ತಿರುವುದು.